ಊಟಕ್ಕೆ ಸುವರ್ಣಗಡ್ಡೆ ಪಲ್ಯ ಮಾಡಿ ನೋಡಿ! ಸಕತ್ ಟೇಸ್ಟಿಯಾಗಿರುತ್ತದೆ

ಊಟ ಮಾಡುವಾಗ ಯಾವುದಾದರೂ ಒಂದು ರುಚಿಯಾದ ಪಲ್ಯ ಇರಬೇಕು. ಅದು ಮಧ್ಯಾಹ್ನದ ಊಟ ಅಥವಾ ರಾತ್ರಿಯ ಊಟ ಆಗಿದ್ದರೂ ಸರಿಯೇ. ಊಟಕ್ಕೆ ರುಚಿಕರವಾಗಿ ಪಲ್ಯ ಇದ್ದರೆ ತುಂಬಾನೇ ಸಂತೋಷವಾಗುತ್ತದೆ. 

ಹಾಗಾದ್ರೆ ನೀವು ಸುವರ್ಣ ಗಡ್ಡೆಯ ಪಲ್ಯವನ್ನು ಮಾಡಿ ನೋಡಿ. ನಾವಿಂದು ಮನೆಯಲ್ಲೇ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಸುವರ್ಣ ಗಡ್ಡೆ ಆರೋಗ್ಯಕ್ಕೆ ತುಂಬಾ ಒಳ್ಳೆಯ ತರಕಾರಿಯಾಗಿದೆ. 

ಹಾಗಾದ್ರೆ ನಾವಿಂದು ಸುವರ್ಣ ಗಡ್ಡೆಯ ಪಲ್ಯ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಎಂದು ನೋಡೋಣ. 

ಬೇಕಾಗುವ ಪದಾರ್ಥಗಳು: 

ಸುವರ್ಣ ಗಡ್ಡೆ - 1/2 ಕೆ.ಜಿ 

ಈರುಳ್ಳಿ - 3 

ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 tbs 

ಸಾಸಿವೆ - 1/4 

ಟೀಸ್ಪೂನ್ ಜೀರಿಗೆ - 1/4 

ಟೀಸ್ಪೂನ್ ಗರಂ

 ಮಸಾಲಾ ಪುಡಿ - 1 

ಟೀಸ್ಪೂನ್ ಜೀರಿಗೆ ಪುಡಿ - 1/2 

ಟೀಸ್ಪೂನ್ ಅರಿಶಿನ ಪುಡಿ - ½

ಟೀಸ್ಪೂನ್ ಕೊತ್ತಂಬರಿ ಪುಡಿ - 1 

ಟೀಸ್ಪೂನ್ ಕೆಂಪು ಮೆಣಸಿನ ಪುಡಿ - 2 

ಟೀಸ್ಪೂನ್ ಕರಿಬೇವಿನ ಎಲೆಗಳು-1/2 

ಕಪ್ ಒಣ ಮೆಣಸು - 3 

ಕೊತ್ತಂಬರಿ ಸೊಪ್ಪು - 1/4 

ಕಪ್ ಹುಣಸೆಹಣ್ಣು - 10 ಗ್ರಾಂ 

ಅಡುಗೆ ಎಣ್ಣೆ 

ರುಚಿಗೆ ಉಪ್ಪು

ಮಾಡುವ ವಿಧಾನ: 
ಮೊದಲು ಸುವರ್ಣ ಗಡ್ಡೆಯನ್ನ ಸಣ್ಣದಾಗೊ ಹಚ್ಚಿಕೊಂಡು ಅದನ್ನು ನೀರಿನಲ್ಲಿ ನೆನೆಸಿಡಬೇಕು. ಒಂದು ಪಾತ್ರೆಯಲ್ಲಿ ನೀರು ಹಾಕಿ ಅದಕ್ಕೆ ನೀರಿನಲ್ಲಿ ನೆನೆಸಿಟ್ಟ ಸುವರ್ಣ ಗಡ್ಡೆ ಹಾಕಿ ಅದಕ್ಕೆ ಅರಶಿಣ, ಹುಣಸೆ ಹಣ್ಣು ಹಾಕಿ 5 ನಿಮಿಷ ಬೇಯಿಸಿಕೊಳ್ಳಬೇಕು. ಇನ್ನೊಂದೆಡೆ ಒಂದು ಪಾತ್ರೆಗೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಈರುಳ್ಳಿ, ಒಣಮೆಣಸು ಹಾಕಿ, ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲ, ಅರಶಿನ ಪುಡಿ, ದನಿಯಾ ಪುಡಿ, ಖಾರದ ಪುಡಿ, ಕೊತ್ತಂಬರಿ ಹಾಕಿ 1 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ಇದಕ್ಕೆ ಬೇಯಿಸಿಕೊಂಡಿರುವ ಸುವರ್ಣ ಗಡ್ಡೆಯನ್ನು ಹಾಕಿ, ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. 5 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ಕೊನೆಯದಾಗಿ ಅದಕ್ಕೆ ಕೊತ್ತಂಬರಿ, ಕರಿಬೇವು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿಕರ ಸುವರ್ಣ ಗಡ್ಡೆಯ ಪಲ್ಯ ರೆಡಿಯಾಗಿರುತ್ತೆ.

ಇನ್ನು ಸುವರ್ಣ ಗಡ್ಡೆ ಚೆನ್ನಾಗಿ ಬೇಯಿಸಬೇಕು. ಏಕೆಂದರೆ ಚೆನ್ನಾಗಿ ಬೆಂದಿಲ್ಲ ಅಂದ್ರೆ ತುರಿಕೆ ಆರಂಭವಾಗಬಹುದು, ನೀವು ಸುವರ್ಣ ಗಡ್ಡೆ ಹೆಚ್ಚುವಾಗಲು ಸಹ ಕೈಗೆ ಎಣ್ಣೆ ಹಚ್ಚಿಕೊಳ್ಳಬೇಕು ಇಲ್ಲದಿದ್ದರೆ ತುರಿಕೆ ಆರಂಭವಾಗುತ್ತದೆ. ಹೀಗಾಗಿ ಸುವರ್ಣ ಗಡ್ಡೆಯನ್ನು ಚೆನ್ನಾಗಿ ಬೇಯಿಸಬೇಕು. ಈ ಪಲ್ಯ ಅನ್ನ, ಚಪಾತಿ ಜೊತೆಯು ಸವಿಯಬಹುದು. ಎಲ್ಲಾ ವಯಸ್ಕರು, ಎಲ್ಲಾ ಸಮಯದಲ್ಲಿಯೂ ಈ ಪಲ್ಯ ಸವಿಯಬಹುದು. ಇದೊಂದು ಆರೋಗ್ಯಕರ ಪದಾರ್ಥವಾಗಿದೆ. ಈ ಪಲ್ಯವನ್ನು ಹಲವು ರೀತಿ ಮಾಡಬಹುದು. ಕೆಲವರು ಇದೇ ಪಲ್ಯವನ್ನು ಕುಕ್ಕರ್ನಲ್ಲಿ ಬೇಯಿಸಿಕೊಂಡು ಮಾಡುತ್ತಾರೆ.  ಜೊತೆಗೆ ಇದರ ಗ್ರೇವಿ ಸಹ ಮಾಡಿ ಸವಿಯುತ್ತಾರೆ.